ಕೆಲವೇ ಹೊತ್ತಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ-ಬಸವರಾಜು ಬೊಮ್ಮಾಯಿ

ನವದೆಹಲಿ : ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿದ ಕೂಡಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಕೆಲವೇ ಹೊತ್ತಿನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯು ಕೆಲವು ನಿಯಮಗಳನ್ನು ಅನುಸರಿಸಲಿದ್ದು, ಅವುಗಳನ್ನು ಹಿರಿಯರು ಅನುಸರಿಸಲೇ ಬೇಕಾಗಿದೆ, ಈ ಹಿನ್ನಲೆಯಲ್ಲಿ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪನವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ, ಅವರು ಚುನಾವನಾ ರಾಜಕೀಯಕ್ಕೆ ಮಾತ್ರ ನಿವೃತ್ತಿ ಘೋಷಿಸಿದ್ದು, ವೈಯಕ್ತಿಕ ಜೀವನದ ರಾಜಕೀಯದಲ್ಲಿರುತ್ತಾರೆ ಎಂದರು.

ಜಗದೀಶ್ ಶೆಟ್ಟರಿಗೂ ನಿವೃತ್ತಿಯಾಗುವಂತೆ ಸೂಚಿಸಲಾಗಿತ್ತು ಅವರು ನಾನು ಇನ್ನೂ ಕೆಲ ಕೆಲಸ ಮಾಡುವುದು ಬಾಕಿ ಇದೆ ಎಂದಿದ್ದಾರೆ, ಕಾಂಗ್ರೆಸ್‍ನವರು 92 ವರ್ಷದ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ನೀಡಿದ್ದಾರೆ, ಆ ಪದ್ಧತಿ ನಮ್ಮ ಪಕ್ಷÀದಲಿಲ್ಲ, ನಮ್ಮ ಪಕ್ಷದ ನಿಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಈ ಹಿನ್ನಲೆಯಲ್ಲಿ ಹಲವರಿಗೆ ಟಿಕೆಟ್ ಸಿಗವುದಿಲ್ಲ, ಹೊಸ ಮುಖಗಳಿಗೆ ಟಿಕೆಟ್ ನೀಡಲಾಗುವುದು, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.

ಲಕ್ಷ್ಮಣ ಸವದಿಯವರು ಅವಸರದ ನಿರ್ಧಾರ ಬೇಡ, ಮಹೇಶ್ ಕುಮಟ್ಟಳ್ಳಿ ಅವರು ಸರ್ಕಾರದ ರಚನೆಗೆ ಸಹಾಯ ಮಾಡಿದ್ದಾರೆ. ಎಂದು ಪರೋಕ್ಷವಾಗಿ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗುವುದು ಕಷ್ಟ ಎಂದು ಹೇಳಿದರು.

ಕೆಲವೇ ಹೊತ್ತಿನಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದ ಮುಖ್ಯಮಂತ್ರಿಗಳು, ಇಂದು ರಾತ್ರಿಯೇ ಬೆಂಗಳೂರಿಗೆ ತೆರಳುವುದಾಗಿ ಹೇಳಿದರು.

Leave a Reply

Your email address will not be published. Required fields are marked *