ತುಮಕೂರು: ಕರ್ನಾಟಕದ ಬಿಜೆಪಿಯ ಅಗ್ರಗಣ್ಯ, ಜನನಾಯಕ, ರೈತ ಹೋರಾಟಗಾರ ಜನರ ಪರವಾಗಿ ಟೊಂಕಕಟ್ಟಿ ನಿಂತು ಹೋರಾಟ ಮಾಡಿದವರು. ಅಭಿವೃದ್ಧಿ ಹರಿಕಾರರು, ಎಲ್ಲಾ ವರ್ಗ ಸಮುದಾಯ ಮೆಚ್ಚಿದ ಜನನಾಯಕರು ಮತ್ತು ಮಾಜಿ ಮುಖ್ಯಮಂತ್ರಿಯವರಾದ ಬಿ.ಎಸ್. ಯಡಿಯೂರಪ್ಪ ರವರ 80ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮವನ್ನು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣನವರ ಅಭಿಮಾನಿ ಬಳಗದಿಂದ ತುಮಕೂರು ವಿವಿ ಮುಂಭಾಗ ಆಚರಿಸಲಾಯಿತು.
ಬಿಎಸ್‍ವೈರವರ 80ನೇ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬೆಳ್ಳಾವಿ ಕಾರದ ಮಠಾಧ್ಯಕ್ಷರಾದ ಶ್ರೀ ಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಶ್ರೀ ಕಾರದ ಬಸವವೀರ ಬಸವಪ್ಪ ಮಹಾಸ್ವಾಮಿಗಳವರು ಚಾಲನೆ ನೀಡಿದರು.
ಬೆಳಿಗ್ಗೆ 7ರಿಂದ ಮಧ್ಯಾಹ್ನ 11ರವರೆಗೆ ಬಿಎಸ್‍ವೈರವರ 3500 ಅಭಿಮಾನಿಗಳಿಗೆ ಉಪಹಾರ ವಿತರಿಸಲಾಯಿತು.
ಅಭಿಮಾನಿಗಳು ಕೇಕ್ ಕತ್ತರಿಸಿ ಬಿಎಸ್‍ವೈ ಜನ್ಮದಿನಕ್ಕೆ ಶುಭ ಹಾರೈಸಿದರಲ್ಲದೆ ಪಟಾಕಿ ಸಿಡಿಸಿ ಹರ್ಷವ್ಯಕ್ತಪಡಿಸಿದರು.