ಗ್ಯಾಸ್ ಸಿಲಿಂಡರ್ ಬೆಲೆ 50 ರೂ.ಗಳಷ್ಟು ಏರಿಕೆ

ತುಮಕೂರು : ಇಂದಿನಿಂದಲೇ ಜಾರಿಯಾಗುವಂತೆ ಅಡಿಗೆ ಅನಿಲ(ಗ್ಯಾಸ್) ಬೆಲೆಯನ್ನು 50 ರೂ.ಗಳಷ್ಟು ಹೆಚ್ಚು ಮಾಡಲಾಗಿದೆ, ಈಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದಷ್ಟು ಹೊರೆಯನ್ನು ಹಾಕಲಾಗಿದೆ.
ನೂತನ ಏರಿಕೆಯಿಂದ 14 ಕಿಲೋದ ಒಂದು ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1103 ರೂ. ಆಗಲಿದೆ.

ಹಾಗೆಯೇ 19 ಕಿಲೋದ ಗ್ಯಾಸ್ ಸಿಲಿಂಡರ್ ಬೆಲೆಯನ್ನು 350 ರೂ.ಗಳಷ್ಟು ಏರಿಸಲಾಗಿದೆ. 19 ಕಿಲೋ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇದೀಗ 2119.50 ರೂ. ತಲುಪಿದೆ.

ಎಲ್ಪಿಜಿ ಸಿಲಿಂಡರ್ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಅನುಸರಿಸಿ ಅಲ್ಪಸ್ವಲ್ಪ ವ್ಯತ್ಯಾಸವಿರುತ್ತದೆ. ರಿಟೇಲರ್ಗಳು ಪ್ರತಿ ತಿಂಗಳ ಆರಂಭದಲ್ಲಿ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಮಾಡುತ್ತಾರೆ. ಪ್ರತಿ ಗ್ರಾಹಕನಿಗೂ ವರ್ಷಕ್ಕೆ 12 ಸಿಲಿಂಡರ್ಗಳು ಸಬ್ಸಿಡಿ ದರದಲ್ಲಿ ಲಭ್ಯವಿರುತ್ತವೆ.

Leave a Reply

Your email address will not be published. Required fields are marked *