ಹಿರಿಯರ ಜಯಂತಿ ಆಚರಿಸುವುದು ಸ್ವಾಭಿಮಾನದ ಸಂಕೇತ

ತುಮಕೂರು. ಒಂದು ಸಮುದಾಯದ ಹಿರಿಯರ ಜಯಂತಿ ಆಚರಿಸುವುದು ಸ್ವಾಭಿಮಾನದ ಸಂಕೇತ ಎಂದು ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕಸಾಪ ಹಾಗು ವಿವಿಧ ನೇಕಾರರ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಅದ್ಯ ವಚನಕಾರ ದೇವರ ದಾಸಿಮಯ್ಯ ಅವರ 1044ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಜಯಂತಿಗಳನ್ನು ಆಚರಿಸುವ ಮೂಲಕ ಸಮುದಾಯವನ್ನು ಒಗ್ಗೂಡಿಸಿ, ಅವರ ಶಕ್ತಿಯನ್ನು ಹೆಚ್ಚಿಸಲು ಇದೊಂದು ವೇದಿಕೆಯಾಗಲಿವೆ ಎಂದರು.

ಬ್ರಿಟಿಷ್ ಪೂರ್ವ ಭಾರತದಲ್ಲಿ ನೇಕಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಅಂದಿನ ಜಿಡಿಪಿಯಲ್ಲಿ ಕೈಮಗ್ಗದ ಪಾತ್ರ ಮಹತ್ವ ದ್ದಾಗಿತ್ತು.ಆದರೆ ಇಂದು ಮಧ್ಯವರ್ತಿಗಳ ಹಾವಳಿಯಿಂದ ನೇಕಾರಿಕೆ ಎಂಬುದು ಲಾಭದಾಯಕವಾಗಿಲ್ಲ.ಇದನ್ನು ಮನಗಂಡ ಕೇಂದ್ರದ ನರೇಂದ್ರಮೋದಿ ಸರಕಾರ 2015ರಲ್ಲಿ ವರ್ಷದ ಆಗಸ್ಟ್ 07ನ್ನು ನೇಕಾರರ ದಿವಸ್ ಎಂದು ಕರೆ ಕರೆಯುವ ಮೂಲಕ ನೇಕಾರರು,ಸೈನಿಕರು ಈ ದೇಶದ ಕಣ್ಣುಗಳಿದ್ದಂತೆ ಎಂಬುದನ್ನು ತೋರಿಸಿಕೊಟ್ಟರು.ಇದರ ಫಲವಾಗಿ ಅನೇಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರ ರೂಪಿಸಿದೆ.ನೇಕಾರರ ಸನ್ಮಾನ್ ಯೋಜನೆಗೆ ಸುಮಾರು 50 ಕೋಟಿ ರೂಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಈ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಲವಾರು ಯೋಜನೆಗಳನ್ನು ನೀಡಿದರೆ, ಇಂದಿನ ಬಸವರಾಜ ಬೊಮ್ಮಾಯಿ ಸರಕಾರ ಕೈಮಗ್ಗಗಳಿಗೆ ಉಚಿತ ವಿದ್ಯುತ್,ನೇಕಾರರಿಗೆ ವಸತಿ, ನೇಕಾರರ ಅಭಿವೃದ್ದಿ ನಿಗಮ ತೆರೆದು ಅವರ ಅರ್ಥಿಕ, ಸಾಮಾಜಿಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿದ್ದಾರೆ ಎಂದು ಶಾಸಕ ಜೋತಿಗಣೇಶ್ ನುಡಿದರು.

ಸರಕಾರದ ಯೋಜನೆಗಳ ಸದುಪಯೋಗವಾಗಬೇಕಾದರೆ ವಿದ್ಯಾವಂತರು,ತಿಳಿದಿವರು ಬೇಕು.ಹಾಗಾಗಿ ಶಿಕ್ಷಣಕ್ಕೆ ನೇಕಾರರ ಸಮುದಾಯ ಒತ್ತು ನೀಡಬೇಕಿದೆ.ಕುಲಕಸುಬು ಮುಂದುವರೆಸುವ ಜೊತೆಗೆ,ಶಿಕ್ಷಣಕ್ಕೂ ಹೆಚ್ಚಿನ ಅದ್ಯತೆ ನೀಡಿದರೆ ಸಮಾಜದ ಒಳ್ಳೆಯ ಗೌರವ ದೊರೆಯಲಿದೆ.ಸಮಾಜದ ಏಳಿಗೆಗಾಗಿ ನನ್ನ ಕೈಲಾದ ಸಹಾಯವನ್ನುಮಾಡಿದ್ದೇನೆ.ಶ್ರೀನೀಲಕಂಠೇಶ್ವರ ದೇವಾಲಯದ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದು,ಮುಂದಿನ ದಿನಗಳಲ್ಲಿ ಉಳಿದ ಸಮುದಾಯಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನೇಕಾರರ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್,ನೇಕಾರರೆಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಕಾಲದಲ್ಲಿ ಪ್ರಧಾನಿ ನರೇಂದ್ರಮೋದಿ ನೇಕಾರರ ದಿವಸ್ ಘೋಷಣೆಯ ನಂತರ ಈ ಸಮುದಾಯ ತಲೆ ಎತ್ತಿ ತಿರುಗುವಂತಹ ವಾತಾವರಣ ಸೃಷ್ಟಿಯಾಗಿದೆ.ಇದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ.2012ರಲ್ಲಿ ನೇಕಾರರ ಒಗ್ಗಟ್ಟು ಪ್ರದರ್ಶನಕ್ಕೆ ತುಮಕೂರಿನಲ್ಲಿ ಬೃಹತ್ ಸಮಾವೇಶ ಮಾಡಿದ ಸಂದರ್ಭದಲ್ಲಿ ಅಂದು ಶಾಸಕರಲ್ಲದಿದ್ದರೂ ಜೋತಿಗಣೇಶ್ ಅವರು ನಮಗೆ ಎಲ್ಲಾ ರೀತಿಯ ಸಹಕಾರ, ಸಹಾಯ ಮಾಡಿದ್ದಾರೆ.ನೇಕಾರ ಸಮುದಾಯಕ್ಕೆ ಸೇರಿದ ದೇವಾಂಗ, ಪದ್ಮಶಾಲಿ, ಕುರುಹಿನ ಶೆಟ್ಟಿ ಮತ್ತು ತೊಟಗವೀರ ಸಮುದಾಯಗಳ ಸಮುದಾಯಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಪದ್ಮಶಾಲಿ ಸಮುದಾಯದ ಅನುದಾನ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.


ನೇಕಾರರ ಒಕ್ಕೂಟ ರಾಜ್ಯಮಟ್ಟದಲ್ಲಿ ಸರಕಾರದ ಮುಂದಿಟ್ಟಿದ್ದ ನೇಕಾರರ ಅಭಿವೃದ್ದಿ ನಿಗಮ,ನೆರೆಯ ರಾಜ್ಯಗಳಂತೆ ಕೈಮಗ್ಗಗಳಿಗೆ ಉಚಿತ ವಿದ್ಯುತ್,ನೇಕಾರರ ಸನ್ಮಾನ ನಿಧಿ ಯಂತಹ ಬೇಡಿಕೆಗಳನ್ನು ಸರಕಾರ ಈಡೇರಿಸಿದೆ.ರೈತರು ಮತ್ತು ನೇಕಾರರ ದೇಶದ ಎರಡು ಕಣ್ಣುಗಳಿದ್ದಂತೆ ಎಂದು ಭಾವಿಸಿರುವ ಸರಕಾರ ರೈತ ಸಾಲ ಮನ್ನಾ ರೀತಿ,ನೇಕಾರರ ಸಾಲ ಮನ್ನಾ ಮಾಡುವಂತೆ

ಸರಕಾರ ದ ಮೇಲೆ ಒತ್ತಡ ತರಬೇಕೆಂದು ಶಾಸಕರಲ್ಲಿ ಧನಿಯಕುಮಾರ್ ಮನವಿ ಮಾಡಿದರು.
ರಾಜ್ಯ ನೇಕಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮಾತನಾಡಿ,ಮಾರ್ಚ್ 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ರಾಜ್ಯ ಸಂಘವತಿಯಿಂದ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತುಮಕೂರು ಜಿಲ್ಲೆಯ ನೇಕಾರ ಬಂಧುಗಳು ಭಾಗವಹಿಸುವಂತೆ ಮನವಿ ಮಾಡಿದರು.

ಜಿಲ್ಲಾ ನೇಕಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣಪ್ಪ ಮಾತನಾಡಿ, ಅನುಭವ ಮಂಟಪದ ಹಿರಿಯರಾಗಿ, ಅಣ್ಣ ಬಸವಣ್ಣನವರ ಸಮಕಾಲಿನರಾಗಿದ್ದ ದೇವರ ದಾಸಿಮಯ್ಯ, ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಬಗ್ಗೆ ಹೆಚ್ಚು ಒತ್ತು ನೀಡಿದವರು.ಅಂತಹವರ ಜಯಂತಿ ಆಚರಿಸುವ ಮೂಲಕ ಸರಕಾರ ತಳ ಸಮುದಾಯಗಳಿಗೆ ಮನ್ನಣೆ ನೀಡಿದೆ.ಸರಕಾರ ರೈತರ ರೀತಿ ನೇಕಾರರಿಗೂ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿಎಸ್ ವಿ ವೆಂಕಟೇಶ್ ರವೀಂದ್ರ, ಮಾತನಾಡಿದರು. ಸಾಧನೆ ಮಾಡಿದ ಸಮುದಾಯದ ನಿವೃತ್ತ ಕೆ.ಪಿ.ಟಿ.ಸಿ.ಎಲ್ ಇಂಜಿನಿಯರ್ ಕೆ.ಹೆಚ್.ರಾಮಸ್ವಾಮಿ, ತುರುವೇಕೆರೆಯ ರಾಘವ,ಎಸ್.ಬಿ.ಐ ನ ನಿವೃತ್ತ ಮುಖ್ಯ ಕ್ಯಾಷಿಯರ್ ಡಿ.ಪಿ.ಶಾಮಣ್ಣ, ಅಂತರರಾಷ್ಟ್ರೀಯ ವೇಗದ ನಡಿಗೆ ಕ್ರೀಡಾಪಟು ನರೇಶ್,ನೇಕಾರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಲಿಂಗರಾಜು ಅವರುಗಳನ್ನು ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *