ತುಮಕೂರು : ವಂಶಪಾರಂಪರ್ಯವಾಗಿ ಪಡೆದು ಜೀವನಕ್ಕೆ ಅವಲಂಬಿಸಿರುವ ಭೂಮಿ ಹಾಗೂ ಗ್ರಾಮಗಳಿಗೆ ಸಂಬಂಧಿಸಿ ಯಾವುದೇ ಚರ್ಚೆ ಸಹಮತ ಪಡೆಯದೇ ಏಕಾಏಕಿ ಕಾರಿಡಾರ್ ಯೋಜನಾ ಪ್ರಾಧಿಕಾರದ ರಚನೆ ಅತ್ಯಂತ ಅನ್ಯಾಯದ್ದು ಹಾಗೂ ಸರ್ವಾಧಿಕಾರದ ವರ್ತನೆಯಾಗಿದೆ ಎಂದು ರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರಾದ ಕಾಮ್ರೇಡ್ ಜಿ.ಸಿ. ಬಯ್ಯಾರೆಡ್ಡಿ ಅಕ್ರೋಶ ವ್ಯಕ್ತಪಡಿಸಿದರು.
ಅವರು ತುಮಕೂರು ತಾಲ್ಲೂಕು ಬೆಳ್ಳಾವಿ ಕ್ರಾಸ್ನಲ್ಲಿ ಕರೇಕಲ್ ಆಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ತುಮಕೂರು ಸ್ಥಳೀಯ ಯೋಜನಾ ಪ್ರದೇಶದ ಘೋಷಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಆಸಕ್ತ ರೈತರು ಸಂಘಟಿಸಿದ್ದ ಸಂಭವನೀಯ ಭಾದಿತ ರೈತರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಶತ ಶತ ಮಾನಗಳಿಂದ.ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ನಡವಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ .ಈ ಕೂಡಲೇ ಯೋಜನಾ ಪ್ರಾಧಿಕಾರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಸರ್ಕಾರಗಳ ತಪ್ಪು ನೀತಿಗಳಿಂದ ವ್ಯವಸಾಯದ ನಷ್ಟಕ್ಕೆ ಒಳಗಾಗಿ ಅಸಹಾಯಕರಾಗಿ ಇರುವ ರೈತರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ರೈತರ ಆಸ್ತಿ ಮತ್ತು ಸಂಪತ್ತನ್ನು ಕಾಪೆರ್Çರೇಟ್ ಕಂಪನಿಗಳಿಗೆ ವರ್ಗಾಯಿಸುವ ಹುನ್ನಾರವನ್ನು ರೈತ ವಿರೋಧಿ ಕಾನೂನುಗಳ ಮೂಲಕ ನಡೆಸಲಾಗುತ್ತಿದೆ. ರೈತ ಹೋರಾಟ ಈ ಹುನ್ನಾರವನ್ನು ಸೋಲಿಸಲಿದೆ ಎಂದು ಎಚ್ಚರಿಸಿದರು.
ಸಮಾವೇಶವನ್ನು ಉದ್ಘಾಟಿಸಿ ಪರಿಸರ ಕಾರ್ಯಕರ್ತ ಸಿ ಯತಿರಾಜು ಈ ಯೋಜನೆಗೆ ರಾಮಕಿ ಎಂಬ ಹೈದರಾಬಾದ್ ಸಂಸ್ಥೆಯ ಮೂಲಕ ಔಟ್ ಸೋರ್ಸ್ ನಲ್ಲಿ ಸರ್ಕಾರದ ಸೆಂಕೆಂಡರಿ ಡಾಟದೊಂದಿಗೆ ಗ್ರಾಮಗಳಿಗೆ ಬೇಟಿ ನೀಡದೇ ನೀಡಿರುವ ವರದಿ ಯೋಜನೆಯನ್ನು ಸಮರ್ಥಿಸಿದೆ ಇದರಲ್ಲಿ ಗ್ರಾಮ ಪಂಚಾಯ್ತಿಗಳ ಕಡೆಗಣನೆ ರೈತರ ಜೊತೆ ಸಂವಾದ ನಡಸದೆ ಜಾರಿಮಾಡುತ್ತಿರುವುದನ್ನು ನಿಲ್ಲಿಸಬೇಕೆಂದರು.
ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಹ ಕಾರ್ಯದರ್ಶಿ ಟಿ ಯಶವಂತ, , ರೈತ ಮುಖಂಡರಾದ ಕಾಮರಾಜು, ಮುಖಂಡ ಬಿ.ಉಮೇಶ್, ಕುಮಾರಸ್ವಾಮಿ ಹಿರೆಗುಂಡಗಲ್, ಪಾಲಾಕ್ಷಕರೀಕೆರೆ ಮುಂತಾದವರು ಮಾತಾನಾಡಿದರು.ವೇದಿಕೆಯಲ್ಲಿ ರೈತ ಮುಖಂಡರಾದ ಶಿವಯ್ಯ ಕೋರಾ, ದಯಾನಂದಸಾಗರ್ ಹಿರೆಗುಂಡಗಲ್, ರುದ್ರೇಶ್, ನಂಜುಂಡಯ್ಯ ಚಿಕ್ಕೊನಹಳ್ಳಿ. ಪ್ರಾಂತ ರೈತ ಸಂಘದ ಕರಿಬಸಯ್ಯ, ದೊಡ್ಡನಂಜಪ್ಪ, ಜಯರಾಮಯ್ಯ, ರೈತಮಹಿಳೆ ಶಾರದಮ್ಮ ಕರ್ನಾಟಕ ರಾಜ್ಯ ರೈತ ಸಂಘದ ರವೀಶ್ ಉಪಸ್ಥಿತರಿದ್ದರು.
ಈ ಯೋಜನೆಗೆ ತುಮಕೂರು ತಾಲ್ಲೂಕು ಕೋರಾ ಹೋಬಳಿಯ 74 ಗ್ರಾಮಗಳು, ಬೆಳ್ಳಾವಿ ಹೋಬಳಿ ಯ 35 ಗ್ರಾಮಗಳು ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ 12 ಗ್ರಾಮಗಳು ಸೇರಿದಂತೆ ಒಟ್ಟು 35,678 ಹೆಕ್ಟೇರ್ ಭೂಮಿ ಯೋಜೆನೆಗೆ ಗುರುತಿಸಲಾಗಿದೆ.
ರೈತರ ಜೊತೆ ಚರ್ಚಿಸದೇ ರಚಿಸಿರುವ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ತುಮಕೂರು ಸ್ಥಳೀಯ ಯೋಜನಾ ಪ್ರಾಧಿಕಾರವನ್ನು ಕೂಡಲೇ ರದ್ದುಪಡಿಸಬೇಕು,ಈ ಯೋಜನೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಕೂಡಲೇ ರೈತರಿಗೆ ಒದಗಿಸಬೇಕು ಎಂದು ಸಮಾವೇಶದಲ್ಲಿ ನಿರ್ಣಯಿಸಲಾಯಿತು.