ಯುವಪೀಳಿಗೆಗೆ ರಾಜಕೀಯ ಪರಿಚಯಿಸಲು ಸಿದ್ದರಾಮಯ್ಯನವರ ಹುಟ್ಟು ಹಬ್ಬ ಆಚರಣೆ-ಕೆ.ಎನ್.ರಾಜಣ್ಣ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಜೀವನದ ಪಯಣವನ್ನು ಮುಂದಿನ ಯುವ ಪೀಳಿಗೆಗೆ ರಾಜಕೀಯವನ್ನು ಪರಿಚಯಿಸುವ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ 2022ರ ಆಗಸ್ಟ್ 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕರು ಹಾಗೂ ಸಿದ್ದರಾಮಯ್ಯನವರ ಜನ್ಮ ದಿನಾಚರಣೆ ಸ್ವಾಗತ ಸಮಿತಿಯ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಹೇಳಿದರು.

https://youtu.be/Pxek4iuq36A

ಅವರಿಂದು ತುಮಕೂರಿನ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷದ ಸೇರಿದಂತೆ ಇತರರ ಸಹಯೋಗದಲ್ಲಿ ನಡೆಯುವ ಈ ಹುಟ್ಟ ಹಬ್ಬವನ್ನು ಬಡಜನರಿಗೆ ಸಿದ್ದರಾಮಯ್ಯ ನೀಡಿದ ಕೊಡುಗೆಗಳನ್ನು ಮೆಲುಕು ಹಾಕಲಾಗುವುದು ಎಂದರು. ಈ ಸಮಾರಂಭ ಸಿದ್ದರಾಮಯ್ಯನವರ ಅಭಿಮಾನಿಗಳು, ಬಡ ಮತ್ತು ಹಿಂದುಳಿದ ವರ್ಗಗಳ ಜನರ ನೇತೃತ್ವದಲ್ಲಿ ನಡೆಯಲಿದೆ, ಸಿದ್ದರಾಮೋತ್ಸವ ಎಂದು ಕೆಲವರು ಬಿಂಬಿಸಲು ಹೊರಟಿದ್ದಾರೆ, ಅದು ಉತ್ಸವ ಅಲ್ಲ, ಹುಟ್ಟು ಹಬ್ಬ ಆಚರಣೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯನವರು ರಾಜಕೀಯಕ್ಕೆ ಬರಲು ಪಟ್ಟಕಷ್ಟದ್ದು, ಸಾಗಿ ಬಂದ ದಾರಿ ಯುವಪೀಳಿಗೆಗೆ ಪರಿಚಯಿಸಬೇಕಿದೆ, ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರನ್ನು ಕಷ್ಟಪಟ್ಟು ಈ ಹುಟ್ಟು ಹಬ್ಬದ ಆಚರಣೆಗೆ ಒಪ್ಪಿಸಲಾಗಿದೆ, ಸ್ವಾತಂತ್ರö್ಯ ತಂದು ಕೊಟ್ಟಂತಹ ಜನರು, ಸಾಹಿತಿಗಳು, ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದು, ಕಾಂಗ್ರೆಸ್ ಪಕ್ಷ ಸ್ವಾತಂತ್ರö್ಯ ತಂದುಕೊಟ್ಟ ಬಗ್ಗೆ ಮತ್ತು ಮುಂದೆ ಯಾವ ಕಾರ್ಯಕ್ರಗಳನ್ನು ಕಾಂಗ್ರೆಸ್ ಮಾಡಲಿದೆ ಎಂಬುದನ್ನು ತಿಳಿಸಲಾಗುವುದು ಎಂದರು.

ಈ ಹುಟ್ಟು ಹಬ್ಬಕ್ಕೆ ಕಾಂಗ್ರೆಸ್ ಎಐಸಿಸಿ ಉಪಾದ್ಯಕ್ಷರಾದ ರಾಹುಲ್‌ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನಖರ್ಗೆ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮುಂತಾದವರು ಭಾಗವಹಿಲಿದ್ದಾರೆ ಎಂದುರು.

ಸುದ್ದಿಗೋಷ್ಠಿಯಲ್ಲಿ ಚಳ್ಳಕೆರೆ ಶಾಸಕರಾದ ರಘುಮೂರ್ತಿ, ಚಿತ್ರದುರ್ಗದ ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಡಾ.ರಪೀಕ್ ಅಹಮ್ಮದ್, ಆಡಿಟರ್ ಟಿ.ಆರ್.ಆಂಜಿನಪ್ಪ, ಪ್ರಜಾಪ್ರಗತಿ ಸಂಪದಕರಾದ ಎಸ್.ನಾಗಣ್ಣ, ಕೈಗಾರಿಕೋದ್ಯಮಿ ಡಿ.ಟಿ.ವೆಂಕಟೇಶ್, ಮಾಜಿ ಜಿ.ಪಂ.ಸದಸ್ಯ ವಿ.ವೆಂಕಟೇಶ್, ತುಮಕೂರು ಜಿಲ್ಲೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶಶಿ ಹುಲಿಕುಂಟೆ ಮುಮತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *