ತುಮಕೂರು: : ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಭಾರತದಾದ್ಯಂತ ಸೈಕಲ್ ಜಾಥಾ ಹಮ್ಮಿಕೊಂಡಿರುವ ನವದೆಹಲಿಯ ಗಗನ್ ಖೋಸ್ಲಾ ಅವರಿಗೆ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ ಆತ್ಮೀಯ ಸ್ವಾಗತಿಸಿ, ಮುಂದಿನ ದೇಶ ಪರ್ಯಟನೆಗೆ ಬಿಳ್ಕೊಟ್ಟಿತು.
ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಘೋಷಣೆಯೊಂದಿಗೆ ದೆಹಲಿಯಿಂದ ಸೈಕಲ್ ಜಾಥಾ ಹಮ್ಮಿಕೊಂಡಿರುವ 66 ವರ್ಷದ ಗಗನ್ ಖೋಸ್ಲಾ ಅವರು ಕಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಮುಂಬೈ ಮಾರ್ಗದ ಮೂಲಕ ದೇಶದ ನಾಲ್ಕು ದಿಕ್ಕುಗಳಲ್ಲಿ ಮಕ್ಕಳಲ್ಲಿ ಶಿಕ್ಷಣ ಅಭಿವೃದ್ಧಿ ಮತ್ತು ಆರೋಗ್ಯದ ಕುರಿತು ಸೈಕ್ಲಿಂಗ್ ಕೈಗೊಂಡಿದ್ದಾರೆ.
ಗಗನ್ ಖೋಸ್ಲಾ ಅವರು ಹೃದ್ರೋಗ ವಿಭಾಗಕ್ಕೆ ತೆರಳಿ ವಿಭಾಗದ ಮುಖ್ಯಸ್ಥ ಡಾ ತಮೀನ್ ಅಹ್ಮದ್, ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕರೊಂದಿಗೆ ಸಂವಾದ ನಡೆಸಿದರು. ತುಮಕೂರಿನಂತಹ ನಗರದಲ್ಲಿಯೂ ಉತ್ಕøಷ್ಟ ಮಟ್ಟದ ಹೃದ್ರೋಗ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೆಹಲಿಯಿಂದ ಸೈಕಲ್‍ನಲ್ಲಿ ತುಮಕೂರಿಗೆ ತಲುಪಿದ ನನಗೆ ಆಸ್ಪತ್ರೆಯಲ್ಲಿನ ಸ್ವಚ್ಚತೆ ತೃಪ್ತಿ ತಂದಿತು ಎಂದು ಅವರು ಇದೇ ವೇಳೆ ನುಡಿದರು. ನಂತರ ಗಗನ್ ಖೋಸ್ಲಾ ಅವರು ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಮತ್ತು ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸಿದರು.
ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಖೋಸ್ಲಾ ಅವರಿಗೆ ಸನ್ಮಾನಿಸಿ, ಶುಭ ಕೋರಲಾಯಿತು. ಪ್ರಾಂಶುಪಾಲರಾದ ಡಾ.ಎಸ್.ಸಿ.ಮಹಾಪಾತ್ರ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ ಜಿ.ಎನ್, ಡಾ ಮಂಜುನಾಥ್ ಜಿ, ವೈದ್ಯಕೀಯ ಅಧೀಕ್ಷಕರಾದ ಡಾ.ಎನ್.ಎಸ್.ವೆಂಕಟೇಶ್, ಡೆಂಟೆಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಡುವಾ, ಡಾ.ಹರ್ಷಿತ್, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೈಕಲ್ ಜಾಥಾಕ್ಕೆ ಶುಭ ಹಾರೈಸಿ, ಬಿಳ್ಕೋಟ್ಟರು.