
ತುಮಕೂರು,ಮೇ.08:ತುಮಕೂರು ನಗರದ ಪಕ್ಷೇತರ ಅಭ್ಯರ್ಥಿಯಾದ ನರಸೇಗೌಡ ಚುನಾವಣಾ ಕಣದಿಂದ ನಿವೃತ್ತಿಹೊಂದಿ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಇದೇ ಸಂಧರ್ಭದಲ್ಲಿ ನರಸೇಗೌಡರು ಮಾತನಾಡುತ್ತಾ ಪಕ್ಷ ಸಿದ್ಧಾಂತ, ಪ್ರಧಾನ ಮಂತ್ರಿಯಾದ ನರೇಂದ್ರಮೋದಿರವರ ಆಡಳಿತ ಮೆಚ್ಚಿ ಹಾಗೂ ತುಮಕೂರು ನಗರದ ಬಿಜೆಪಿ ಅಭ್ಯರ್ಥಿಯಾದ ಜಿ.ಬಿ.ಜ್ಯೋತಿಗಣೇಶ್‍ರವರ ಸರಳತೆ-ಸಜ್ಜನಿಕೆ, ಆಡಳಿತ ವೈಕರಿಗೆ ಮೆಚ್ಚಿ ನಾನು ಇಂದು ಪಕ್ಷೇತರ ಅಭ್ಯರ್ಥಿಯಿಂದ ನಿವೃತ್ತಿಹೊಂದಿ ಬಿಜೆಪಿ ಪಕ್ಷಕ್ಕೆ ನನ್ನ ಬೆಂಬಲಿಗರೊಂದಿಗೆ ಇಂದು ಸೇರ್ಪಡೆಗೊಂಡಿರುತ್ತೇನೆ.ಹಾಗೂ ಬಿಜೆಪಿ ಗೆಲುವಿಗೆ ನಾವೇಲ್ಲರೂ ಶ್ರಮಿಸೋಣ ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಸದರಾದ ಜಿ.ಎಸ್.ಬಸವರಾಜ್,ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ರವಿಶಂಕರ್ ಹೆಬ್ಬಾಕ,ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡ,ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್,ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ,ಸಹ ಪ್ರಮುಖ್ ಜೆ.ಜಗದೀಶ್, ತುಮಕೂರು ನಗರ ಮಂಡಲ ಕಾರ್ಯದರ್ಶಿ ರಾಧ ಗಂಗಾಧರ್ ಹಾಗೂ ಪ್ರಮುಖರು ಭಾಗವಹಿಸಿದ್ದರು.