ಲಾಡ್ಜ್ ನಲ್ಲಿ ಅಕ್ರಮ ಹಣ ಮಾಹಿತಿ ನೀಡಿದವರ ಮೇಲೆ ಎಫ್‍ಐಆರ್-ಖಂಡನೆ, ತನಿಖೆಗೆ ಸೊಗಡು ಶಿವಣ್ಣ ಆಗ್ರಹ

ತುಮಕೂರು : ನಗರದ ಲಾಡ್ಜ್ ಒಂದರಲ್ಲಿ ಚುನಾವಣೆಯಲ್ಲಿ ಅಕ್ರಮ ನಡೆಸಲು ಸಂಗ್ರಹಿಸಿದ್ದ ಸ್ಮಾರ್ಟ್ ಸಿಟಿ ಹಣ ಯಾರದು ಎಂದು ಕೇಳುವಂತೆ ಪೊಲೀಸರಿಗೆ ಮಾಹಿತಿ ನೀಡಿದವರ ಮೇಲೆ ಎಫ್‍ಐಆರ್ ದಾಖಲಿಸಿರುವುದು ಪೊಲೀಸ್ ಮತ್ತು ಚುನಾವಣಾ ಆಯೋಗದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತವೆ ಎಂದು ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತ ಪಡಿಸಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿಸಿಎನ್‍ವಿ ಕಂಫಟ್ರ್ಸ್‍ನಲ್ಲಿ ಸಿಐಟಿ ಕಾಲೇಜು ಹೆಸರಿನಲ್ಲಿ 25, 26, 27 ಕೊಠಡಿಯನ್ನು 2023ರ ಮೇ 3ರಂದು ಕಾಯ್ದಿರಿಸಿಕೊಂಡು ದಿನೇ ದಿನೇ ಹಣ ಶೇಖರಿಸಿಟ್ಟಿದ್ದು, ಈಗ ಹಂಚುವಾಗ ಸಿಕ್ಕಿ ಬಿದ್ದು, ಮಾಹಿತಿ ನೀಡಿದವರ ಮೇಲೆಯೇ ಚುನಾವಣಾ ಆಯೋಗ ಮತ್ತು ಪೆÇಲೀಸ್ ಇಲಾಖೆ ಪ್ರಕರಣ ದಾಖಲಿಸಿರುವುದು ಶೋಭೆ ತರುವಂತವುದಲ್ಲ ಎಂದು ಶಿವಣ್ಣನವರು ಹೇಳಿದರು.

ಲಾಡ್ಜ್‍ನಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದವರು ಯಾರು ಹಾಗೂ ಹಣ ಸಂದಾಯ ಮಾಡಿದವರು ಯಾರು ಎಂಬುದನ್ನು ತನಿಖೆಗೆ ಒಳಪಡಿಸಬೇಕಾಗಿದೆ.

ಸೋಲಿನ ಭೀತಿಯಿಂದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಮತ್ತು ಕುಂದರನಹಳ್ಳಿ ರಮೇಶ್ ಇವರು ತುಮಕೂರು ನಗರ ಅಭ್ಯರ್ಥಿಯ ಪರ ನಡೆಸುತ್ತಿರುವ ಹಣ ಹಂಚಿಕೆ ನಾಚಿಕೆಗೇಡಿನ ಕೆಲಸ ಎಂದು ಹೇಳಿದರು.

 ಸ್ಮಾರ್ಟ್‍ಸಿಟಿ ಯೋಜನೆ, ಟ್ರಾನ್ಸ್‍ಫರ್ ದಂಧೆ, ಕಾಮಗಾರಿ ಕಮೀಷನ್‍ನಿಂದ ಲೂಟಿ ಮಾಡಿದ ಹಣ ಹಂಚುತ್ತಿದ್ದಾರೆ, ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರು ಇದಕ್ಕೆ ಒಪ್ಪದ ಕಾರಣ ಬೇರೆ ಬೇರೆ ಪೇಮೆಂಟ್ ಕಾರ್ಯಕರ್ತರನ್ನು ಬಳಸಿಕೊಂಡು     ಹಣ  ಹಂಚಿಕೆ ದಂಧೆ ನೆಡೆಸುತ್ತಿದ್ದಾರೆ ಎಂದು ಆರೋಪಿಸಿದರು.

  ಈ ಹಿಂದೆ ಬಿಜೆಪಿ ಧುರೀಣರನ್ನು ಬೈಯ್ಯುತ್ತಿದ್ದ ಇವರು ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದು ಅಧಿಕಾರ, ಹಣ ದಾಹಕ್ಕೆ    ಪಕ್ಷದ ಮರ್ಯಾದೆ ಹರಾಜು ಮಾಡುತ್ತಿರುವುದು ವಿಪರ್ಯಾಸ, ಸಿಐಟಿ ಕಾಲೇಜಿನ ಪ್ರಜ್ಞಾವಂತ ಉಪನ್ಯಾಸಕರು-ವಿದ್ಯಾವಂತ ಸಿಬ್ಬಂದಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು.


ಕುಂದರನಹಳ್ಳಿ ರಮೇಶ್‍ರವರು ನನ್ನ ಮೇಲೆ ಹಲ್ಲೆ ಮಾಡಿ ಕೇವಲ 23000/- ರೂ. ದರೋಡೆಯಾಗಿದೆಯೆಂದು   ಹೇಳಿರುವುದು ಅರ್ಥಹೀನ. ಅವರು ಲಾಡ್ಜ್‍ನಲ್ಲಿ ಇದ್ದುದಕ್ಕೆ ಕಾರಣವೇನು? ವಿಚಾರಣೆಯನ್ನು ಪೊಲೀಸರು ನಡೆಸಬೇಕಾಗಿದೆ ಎಂದರು.

ಕುಂದರನಹಳ್ಳಿ ರಮೇಶ್ ಹಲ್ಲೆಯಾಗಿರುವುದು ಮಧ್ಯ ರಾತ್ರಿ 1-30 ಗಂಟೆಗೆ  ಎಂದು ದೂರಿನಲ್ಲಿ ಹೇಳಿ ಬೆಳಗಿನ ಜಾವ 3-15 ಗಂಟೆಗೆ ದೂರು  ದಾಖಲಿಸಿರುವುದು   ಅನುಮಾನ ಮೂಡಿದೆ. ಇವರ ಹತ್ತಿರ ಲಾಡ್ಜ್‍ನಲ್ಲಿ ಹಲವಾರು ಕೋಟಿಗಳಿದ್ದ ಈ ಹಣವನ್ನು ಸಾಗಿಸಲು ಪೂರಕವಾಗಿ ಕಾಲಾವಕಾಶ ತೆಗೆದುಕೊಂಡು    ದೂರು ದಾಖಲಿಸಲು ವಿಳಂಬ ಮಾಡಿರುವುದಾಗಿ ತಿಳಿದು ಬಂದಿದ್ದು. ಚುನಾವಣಾ ವಿಚಕ್ಷಣ ದಳ ಸಹ ಇವರಿಗೆ ಬೆಂಬಲ  ನೀಡಿರಬಹುದೆಂದು ಅಲ್ಲಿನ ಜನತೆಯೇ ಹೇಳುತ್ತಿದ್ದಾರೆ ಎಂದು ದೂರಿದರು.

ಲಾಡ್ಜ್ ಹತ್ತಿರ KA-09 Z-7839 SUV Red Car  ಇದ್ದು, ಅದನ್ನು ಉಪಯೋಗಿಸಿದ್ದಾರೆ ಎಂಬ ಮಾಹಿತಿ   ಜನಜನಿತವಾಗಿದೆ. ಆರ್‍ಟಿಓ ಮುಖಾಂತರ ಈ ಕಾರಿನ ಮಾಹಿತಿ ಸಂಗ್ರಹಿಸಿದಲ್ಲಿ ಸತ್ಯಾಂಶ ಹೊರಬೀಳಬಹುದು ಎಂದರು.
ಎನ್‍ಇಪಿಎಸ್ ಪೆÇಲೀಸ್ ಠಾಣೆಯಲ್ಲಿ ಮೇ 8ರ ಬೆಳಿಗ್ಗೆ 7-20ರಿಂದ 7-35ರವರೆಗೆ ಲೋಕಸಭಾ ಸದಸ್ಯರು, ವಕೀಲರಾದ     ಎಂ.ಎಂ. ಮಲ್ಲಿಕಾರ್ಜುನಯ್ಯನವರು ಹಾಗೂ ಕುಂದರನಹಳ್ಳಿ ರಮೇಶ್ ಇವರು ಇದ್ದಿದ್ದು ಈ ಪ್ರಕರಣದಲ್ಲಿ ರಾಜಕೀಯ ಪ್ರವೇಶ ಬೆರೆಸಿದಂತಾಗಿದೆ  ಎಂದು ತಿಳಿಸಿದರು.

ಈ ಸಮಯದಲ್ಲಿ ನಗರಪಾಲಿಕೆ ಉಪಾಧ್ಯಕ್ಷರು  ನರಸಿಂಹಮೂರ್ತಿಯವರು ಹಾಗೂ ಜೆಡಿಎಸ್ ಮುಖಂಡ ರವೀಶ್     ಜಹಂಗೀರ್ ಠಾಣೆಗೆ ಪ್ರವೇಶ ಕೋರಿದ್ದು, ಅವರನ್ನು ಒಳಗಡೆ ಬಿಡದಂತೆ ತಡೆಹಿಡಿದ ಕಾರಣ ಪೊಲೀಸರು ಜನತೆಗೆ ತಿಳಿಸಬೇಕಿದೆ ಎಂದರು.

ಲಾಡ್ಜ್‍ನಲ್ಲಿ ಹಣ ದೊರೆತಾಗ ಚುನಾವಣಾ ಆಯೋಗದ ಅಧಿಕಾರಿಗಳು ಭೇಟಿ ನೀಡಿಲ್ಲ, ಕಾರಣ ತಿಳಿಯುತ್ತಿಲ್ಲ.
ತುಮಕೂರು ಲೋಕಸಭಾ ಸದಸ್ಯರು ರಾಜಕೀಯಕ್ಕೆ ಬಂದಾಗಿಲಿಂದಲೂ ಬ್ರಿಟೀಷರಂತೆ ಒಡೆದು ಆಳುವ ನೀತಿಯನ್ನು ಅನುಸರಿಸಿ ಎಲ್ಲ ಸಮಾಜವನ್ನೂ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಮಾಜ ಇಬ್ಭಾಗ ಮಾಡುತ್ತಿದ್ದಾರೆ. ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.

ಹಣ ಹಂಚಿಕೆ ಪ್ರಕರಣ, ಮತದಾರರಿಗೆ ಆಮಿಷ ಒಡ್ಡುವ ಕಾರ್ಯ, ಇವುಗಳು ಭಾರತೀಯ ದಂಡ ಸಂಹಿತೆ 1860ರ ಅಧ್ಯಾಯ 9 ಎ, ಸೆಕ್ಷನ್ 171 ಎರಿಂದ 171 ಎಫ್‍ರವರೆಗೆ ಬರುವ ನಿಯಮದಡಿಯಲ್ಲಿ ಲೋಕಸಭಾ ಸದಸ್ಯರು, ಜಿಲ್ಲಾ ಬಿಜೆಪಿ ಅಧ್ಯಕ್ಷರು, ಕುಂದರನಹಳ್ಳಿ ರಮೇಶ್‍ರವರು, ಚುನಾವಣಾ ಅಭ್ಯರ್ಥಿ ಇವರ ಮೇಲೆ ಪ್ರಕರಣ ದಾಖಲಿಸುವಂತೆ ರಾಜ್ಯ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾ ಆಯೋಗವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *