ತುಮಕೂರು : ತಾಲ್ಲೂಕುಗಳಲ್ಲಿ ಕೇಂದ್ರಗಳಲ್ಲಿ ಕ್ರೀಡಾಂಗಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕ್ರೀಡಾ ಹಾಸ್ಟೆಲ್ ಸೌಲಭ್ಯಕ್ಕಾಗಿ ತುಮಕೂರು ಜಿಲ್ಲೆಯ 10 ತಾಲ್ಲೂಕಗಳ ಹಿರಿಯ ಕ್ರೀಡಾಪಟುಗಳು, ನಿವೃತ್ತ ಕ್ರೀಡಾಧಿಕಾರಿಗಳ ಜೊತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ಹಾಲಪ್ಪನವರು ಸಮಾಲೋಚನೆ ನಡೆಸಿದರು.
ಜಿಲ್ಲಾ ಕೇಂದ್ರವು ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಉತ್ತಮ ಕ್ರಿಡಾಂಗಣ, ಕ್ರೀಡೆಗೆ ಬೇಕಾದ ಕ್ರೀಡಾ ಸಾಮಗ್ರಿಗಳು, ಕೋಚ್‍ಗಳನ್ನು ನೇಮಿಸುವುದು, ಶಿಥಿಲಗೊಂಡಿರುವ ಕ್ರೀಡಾಂಗಣಗಳನ್ನು ದುರಸ್ಥಿ ಮಾಡಿಸಿ ಮಕ್ಕಳು, ಯುವಕರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಬೇಕಾದ ಸವಲತ್ತುಗಳನ್ನು ಒದಗಿಸುವಂತಹ ಕೆಲಸಗಳಾಗಬೇಕೆಂಬ ಸಲಹೆ ಸೂಚನೆಗಳನ್ನು ಇಂದು ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ನಡೆದ ಎಲ್ಲಾ ತಾಲ್ಲೂಕುಗಳ ಹಿರಿಯ ಕ್ರೀಡಾಪಟುಗಳು ಅಭಿಪ್ರಾಯ ವ್ಕಕ್ತಪಡಿಸಿದರು.
ಇದನ್ನು ಆಧರಿಸಿ ಮುರಳೀಧರ ಹಾಲಪ್ಪನವರು ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಿಗೆ ಈ ಕ್ರೀಡಾಂಗಣಗಳಲ್ಲಿ ಕೆಳಗಿನ ಸೌಲಭ್ಯಗಳನ್ನು ಒದಗಿಸುವಂತೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ 54 ವಿಶ್ವವಿದ್ಯಾಲಯಗಳು, 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು 321 ಖಾಸಗಿ ಅನುದಾನಿತ ಕಾಲೇಜುಗಳು ಇದ್ದು ಇವುಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಸಹ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಕೋಚಿಂಗ್ ಬಗ್ಗೆ, ಸ್ಕಾಲರ್ ಶಿಪ್ , ಆಯ್ಕೆಯ ವಿಧಾನ, ವಸತಿ, ಸರ್ಕಾರಿ – ಖಾಸಗಿ ಪ್ರಾಯೋಜತ್ಪಕದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು. ವಿದೇಶಗಳಲ್ಲಿ ಕ್ರೀಡೆಗಳ ಬೆಳವಣಿಗೆಗೆ ವಿಶ್ವವಿದ್ಯಾಲಯಗಳೇ ಮೂಲಸೆಲೆ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಾಮಥ್ರ್ಯಕ್ಕನುಗುಣವಾಗಿ ಕ್ರೀಡೆಗಳಲ್ಲಿ ತೊಡಗಿಕೊಳ್ಳಲು ಅವಕಾಶ ನೀಡಬೇಕು. ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಯುರೋಪ್ ದೇಶಗಳ ಅಥ್ಲೀಟ್ ಗಳೆಲ್ಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ನಮ್ಮಲ್ಲೂ ಸಹ ಕ್ರೀಡೆ ಮತ್ತು ಓದಿಗೆ ಸಮಾನ ಆದ್ಯತೆ ಮತ್ತು ಸಹಕಾರ ನೀಡಬೇಕು. ಸಾಧಕರಿಗೆ ಅನುದಾನ, ಹುದ್ದೆಗಳ ಪ್ರೋತ್ಸಾಹ ನೀಡಬೇಕು. ಎಂದು ಒತ್ತಾಯಿಸಿದ್ದಾರೆ.
ಕ್ರೀಡಾ ಚಟುವಟಿಕೆಗಳಿಗೆ ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಪ್ರತಿಯೊಂದು ಪಂಚಾಯಿತಿ ಕೇಂದ್ರಗಳಲ್ಲಿ ಲಭ್ಯವಾಗಿಸುವುದು. ಕ್ರೀಡೆಗಳ ಬಗ್ಗೆ ಉತ್ತಮ ಪ್ರೋತ್ಸಾಹ ಹಾಗೂ ಭವಿಷ್ಯದಲ್ಲಿ ಅದರ ಪ್ರಯೋಜನಗಳ ಬಗ್ಗೆ ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಹಾಗೂ ಪೆÇಲೀಸ್ ಇಲಾಖೆಯಲ್ಲಿ ಶೇ. 50% ರಷ್ಟು ಮೀಸಲಾತಿ ತಿಳುವಳಿಕೆಯನ್ನು ಎಲ್ಲಾ ಶಾಲೆಗಳಲ್ಲಿ ದೊರಕುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಎಂದು ಮುರಳೀಧರ ಹಾಲಪ್ಪನವರು ತಿಳಿಸಿದ್ದಾರೆ.
ಖೋಖೋ, ಕಬಡ್ಡಿ, ವಾಲಿಬಾಲ್, ಫುಟ್ಬಾಲ್, ಬ್ಯಾಡ್ಮಿಂಟನ್, ಅಥ್ಲೆಟಿಕ್ ಗಳ ಬಗ್ಗೆ ಉತ್ತಮ ಮಾಹಿತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಸಧೃಢ ಕ್ರೀಡಾಪಟುಗಳ ತಯಾರಿ ಬಗ್ಗೆ ಅಗತ್ಯ ಸೌಲಭ್ಯ ಒದಗಿಸುವುದು. ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ನವೀಕರಣದ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಕ್ರೀಡಾಪಟುಗಳು ಉಪಯೋಗಿಸಲು ಅನುಕೂಲ ಮಾಡಿಕೊಡಬೇಕಾಗಿದೆ. ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದೇಸಿ ಕ್ರೀಡೆ ಹಾಗೂ ಇತರೆ ಪಂದ್ಯಾವಳಿಗಳ ಆಯೋಜನೆಗೆ ಸಿದ್ಧತೆಗಳು. ಕಬಡ್ಡಿ, ಖೋಖೋ ಅಂಕಣ, ವಾಲಿಬಾಲ್ ಅಂಕಣ, ಬ್ಯಾಡ್ಮಿಂಟನ್ ಅಂಕಣಗಳ ನಿರ್ಮಾಣಕ್ಕೆ ಒತ್ತು ನೀಡಬೇಕು. ಉತ್ತಮ ಸೌಕರ್ಯವುಳ್ಳ ಬಯಲು ರಂಗಮಂದಿರವನ್ನು ಜರೂರಾಗಿ ಮುಕ್ತಾಯಗೊಳಿಸುವುದು ಹಾಗೂ ಒಳಾಂಗಣ & ಹೊರಾಂಗಣ ಜಿಮ್ ಗಳ ಅಭಿವೃದ್ಧಿ , ಶೌಚಾಲಯ, ಮಕ್ರ್ಯೂರಿ – ಫ್ಲಡ್ ಲೈಟ್ಸ್ ಗಳನ್ನು ಅಳವಡಿಸಬೇಕಿದೆ ಎಂದು ತಿಳಿಸಿದ್ದಾರೆ.
ಹಿರಿಯ ನಾಗರೀಕರ – ವಾಯು ವಿಹಾರಿಗಳಿಗೆ ಟ್ರಾಕ್ ಅಗತ್ಯತೆಗಳನ್ನು ಸಹ ಪೂರೈಸುವುದು, ಯುವ ಸಬಲೀಕರಣ ಯೋಜನೆಯ ಅಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಯುವ ಜನತೆಗೆ ಕೌಶಲ್ಯ ತರಬೇತಿ ಕಾರ್ಯಗಾರಗಳನ್ನು ಕೈಗೊಳ್ಳುವುದು ಎಂದು ತಿಳಿಸಿದ್ದಾರೆ.
ಇಂದು ನಡೆದ ಸಭೆಯಲ್ಲಿ ಯಂಗ್ ಛಾಲೆಂಜರ್ಸ್ ಸಂಸ್ಥೆ ಅಧ್ಯಕ್ಷ ವೇಣುಗೋಪಾಲ ಕೃಷ್ಣ, ನಿವೃತ್ತ ಉಪ ನಿರ್ದೇಶಕರು ಯುವಜನ ಸೇವಾ ಕ್ರೀಡಾ ಇಲಾಖೆ ಎಂ. ಚಂದ್ರಶೇಖರ್, ಗುಬ್ಬಿ ಚನ್ನಬಸವೇಶ್ವರ ಯುವಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್, ಡಾ.ಅರುಂಧತಿ, ಪದ್ಮನಾಭ್, ನಿವೃತ್ತ ದೈಹಿಕ ಶಿಕ್ಷಕ ಪ್ರಭಾಕರ್, ಡಿಪಿಒ ಡಿಡಿಪಿಐ ಕಚೇರಿ ಎಂ.ಬಿ.ಪರಮೇಶ್ವರಪ್ಪ, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಹೆಚ್.ಎನ್.ಲೋಕೇಶ್ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.